ಡಾ ಪ್ರಕಾಶ ಗರುಡ -
ಅಜ್ಜ ನಾಟಕಾಲಂಕಾರ ಅಭಿನಯಕೇಸರಿ ಬಿರುದಾಂಕಿತ ಗರುಡ ಸದಾಶಿವರಾಯರು ವೃತ್ತಿ ರಂಗಭೂಮಿಯ ಕಲಾವಿದರು. ತಂದೆ ಶ್ರೀಪಾದರಾವ್ ಗರುಡರು ವೃತ್ತಿರಂಗ ಭೂಮಿಯಲ್ಲಿ ನಟರಾಗಿ ನಾಟಕ ಕಂಪನಿಯ ಜೊತೆ ತಿರುಗಾಡುತ್ತಿದ್ದರಿಂದ ಕಂಪನಿ ಮುಕ್ಕಾಂ ಮಾಡಿದ್ದಲ್ಲಿ (ಕುಮುಟಾ, ಗೋಕರ್ಣ ಹಾನಗಲ್, ರಬಕವಿ, ಜಮಖಂಡಿ, ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ) ಪ್ರಾಥಮಿಕ ಹಾಗೂ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ, ಚಿಕ್ಕಂದಿನಲ್ಲಿ ಕಂಪನಿ ನಾಟಕಗಳಲ್ಲಿ ಅಭಿನಯ.
ನೀನಾಸಂ ತಿರುಗಾಟದಲ್ಲಿ ಮುಖ್ಯನಟನಾಗಿ (೧೯೮೯-೯೦) ಅಭಿನಯಿಸಿದ ಅನುಭವ. ಗಿರೀಶ ಕಾರ್ನಾಡರ ತುಘಲಕ್ ನಾಟಕದಲ್ಲಿ ತುಘಲಕ್ ಪಾತ್ರವಹಿಸಿ ಸುಮಾರು ೫೦ ಪ್ರದರ್ಶನಗಳನ್ನು ರಾಜ್ಯಾದ್ಯಂತ ನೀಡಲಾಯಿತು. ಮೃಛಕಟಿಕ, ಜಗಜ್ಯೋತಿ ಬಸವೇಶ್ವರ, ದೊರೆ ಈಡಿಪಸ್, ಅಂಜಮಲ್ಲಿಗೆ, ವಾಯ್ಯಝಾಕ್, ವಿಷಮ ವಿವಾಹ, ಕದಡಿದ ನೀರು, ಜೈಸಿದನಾಯ್ಕ, ಚೆರಿ ಆರ್ಚರ್ಡ, ಚೇರ್ಸ ಇತ್ಯಾದಿ ೫೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ.
ಕಾಲೇಜು ವಿದ್ಯಾರ್ಥಿಗಳಿಗಾಗಿ, ಮಕ್ಕಳಿಗಾಗಿ ದೊಡ್ಡವರಿಗಾಗಿ ಸುಮಾರು ಹೆಚ್ಚು ೫೦ಕ್ಕೂ ರಂಗ ಕಾರ್ಯಾಗಾರ, ಗೊಂಬೆ ಆಟಗಳ ತರಬೇತಿ. ಶಿಕ್ಷಣದಲ್ಲಿ ರಂಗಭೂಮಿ ಯೋಜನೆಯ ಅಡಿಯಲ್ಲಿ ಡಿ. ಎಡ್ ಶಿಕ್ಷಕರಿಗೆ, ಸರ್ ರತನ ಟಾಟಾ ಟ್ರಸ್ಟ್ ಮುಂಬಯಿ ಹಾಗೂ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಇನ್ಫೋಸಿಸ್ ಫೌಂಡೇಶನ್ ಬೆಂಗಳೂರು. ಮತ್ತು ಗಯಟೆ...